ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ಏಕಾಏಕಿ ಹೆಚ್ಚುವರಿ ನೀರು ಹೊರಗೆ ಬಿಟ್ಟಿದ್ದು ಪ್ರವಾಹ ದುರಂತ ಸಂಭವಿಸಲು ಕಾರಣಗಳಲ್ಲಿ ಒಂದು ಎಂದು ಕೇರಳ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಮುಲ್ಲಪೆರಿಯಾರ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದರಿಂದಾಗಿ ಇಡುಕ್ಕಿ ಜಲಾಶಯದ ಭರ್ತಿಯಾಗಿ ಅದರ ನೀರನ್ನು ಹೊರಕ್ಕೆ ಬಿಡುವಂತಾಯಿತು ಎಂದು ಕೇರಳ ಅಫಿಡವಿಟ್ ಸಲ್ಲಿಸಿದೆ.
